ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (Autonomous)* ನಲ್ಲಿ MBA, MCA ಪ್ರವೇಶಕ್ಕೆ ವಿದ್ಯಾರ್ಥಿವೇತನ ಪರೀಕ್ಷೆಯ ನೋಂದಣಿ ಆಹ್ವಾನ ಪ್ರಾರಂಭ

ಉಡುಪಿ ಜಿಲ್ಲೆಯ ವೊಳಕಾಡು ಪ್ರದೇಶದಲ್ಲಿರುವ ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (Autonomous)* ಸಂಸ್ಥೆಯು 2026-27ನೇ ಶೈಕ್ಷಣಿಕ ಸಾಲಿನ MBA, MCA ಕಾರ್ಯಕ್ರಮಗಳಿಗೆ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿದ್ದು, ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿವೇತನ ಪರೀಕ್ಷೆಯನ್ನೂ ಆಯೋಜಿಸಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

“ನಿಮ್ಮ ಉನ್ನತ ಶಿಕ್ಷಣದ ಕನಸಿಗೆ ಆರ್ಥಿಕ ಬೆಂಬಲ – ಪೂರ್ಣಪ್ರಜ್ಞ ಸ್ಕಾಲರ್‌ಶಿಪ್ ಟೆಸ್ಟ್ 2026-27″ ಎಂಬ ಧ್ಯೇಯದಡಿ ಇದೇ ತಿಂಗಳ 28ರಂದು ಆನ್‌ಲೈನ್ ಹಾಗೂ ಆಫ್‌ಲೈನ್ ಮಾದರಿಯಲ್ಲಿ ವಿದ್ಯಾರ್ಥಿವೇತನ ಪರೀಕ್ಷೆ ನಡೆಯಲಿದ್ದು, MBA ಮತ್ತು MCA ಪ್ರವೇಶ ಪಡೆಯಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಭಾಗವಹಿಸಿ ವಿಶೇಷ ಶುಲ್ಕ ರಿಯಾಯಿತಿ ಹಾಗೂ ವಿದ್ಯಾರ್ಥಿವೇತನ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ಸಂಸ್ಥೆ:
ವಿಶ್ವದ ಅಗ್ರ ಬಿಸಿನೆಸ್ ಶಾಲೆಗಳ ಪೈಕಿ ಗುರುತಿಸಿಕೊಂಡಿರುವ, NAAC A+ ಮಾನ್ಯತೆ ಪಡೆದಿರುವ ಹಾಗೂ AICTE ಅನುಮೋದನೆ ಹೊಂದಿರುವ ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಅನುಭವಿ ಬೋಧಕ ವರ್ಗ, ಸಂಶೋಧನೆಗೆ ಒತ್ತು, ಉದ್ಯಮೋದ್ಯಮ ಕೌಶಲ್ಯ ಅಭಿವೃದ್ಧಿ ಹಾಗೂ ಅತ್ಯುತ್ತಮ ಪ್ಲೇಸ್‌ಮೆಂಟ್ ಅವಕಾಶಗಳ ಮೂಲಕ ರಾಜ್ಯದ ಪ್ರಮುಖ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ಸಂಸ್ಥೆಯು ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ವ್ಯವಸ್ಥೆ, ಆಧುನಿಕ ಕಂಪ್ಯೂಟರ್ ಲ್ಯಾಬ್‌ಗಳು, ಡಿಜಿಟಲ್ ಗ್ರಂಥಾಲಯ, ಪ್ರತ್ಯೇಕ ವಸತಿ ಸೌಲಭ್ಯ, ಕೌಶಲ್ಯ ಅಭಿವೃದ್ಧಿ ತರಬೇತಿಗಳು ಹಾಗೂ ಉದ್ಯೋಗಮುಖಿ ಕಲಿಕಾ ವಾತಾವರಣವನ್ನು ಒದಗಿಸುತ್ತಿದೆ.

ಸಂಸ್ಥೆಯಲ್ಲಿ MBA (Dual Specialization), MCA (Dual Specialization), ಸಂಶೋಧನಾ (Ph.D.) ಕಾರ್ಯಕ್ರಮಗಳು ಹಾಗೂ ವಿವಿಧ ಮೌಲ್ಯವರ್ಧಿತ ಕೋರ್ಸ್‌ಗಳು ಲಭ್ಯವಿದ್ದು, ವಿದ್ಯಾರ್ಥಿಗಳಿಗೆ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಪ್ರತ್ಯೇಕ ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಪಿಜಿಸಿಇಟಿ (PGCET) ಕೋಡ್‌ಗಳನ್ನೂ ಸಂಸ್ಥೆ ಪ್ರಕಟಿಸಿದ್ದು, MBA – B243 ಹಾಗೂ MCA – C574 ಎಂದು ತಿಳಿಸಿದೆ.

ನೋಂದಣಿ ಲಿಂಕ್:
ವಿದ್ಯಾರ್ಥಿಗಳು ಕೆಳಗಿನ ಗೂಗಲ್ ಫಾರ್ಮ್ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ: https://forms.gle/nniSM4Sauu1EVZ3p6

ಹೆಚ್ಚಿನ ಮಾಹಿತಿಗಾಗಿ +91 98452 33694 ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ www.pim.ac.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.






Leave a Reply

Your email address will not be published. Required fields are marked *