ಉದ್ಯಮಶೀಲತಾ ಅಭಿವೃದ್ಧಿ ಪ್ರೇರಣಾ ಶಿಬಿರ
ಉದ್ಯಮಶೀಲ ಯುವ ಜನತೆಗೆ ಉಡುಪಿ ಜಿಲ್ಲೆಯಲ್ಲಿ ಸ್ವಉದ್ಯೋಗ ಆರಂಭಿಸಲು ವಿಪುಲ ಅವಕಾಶಗಳಿವೆ. ಯುವ ಜನತೆಯನ್ನು ಪೆÇ್ರೀತ್ಸಾಹಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಸಣ್ಣ ಕೈಗಾರಿಕೆ, ಸೇವಾ ಕ್ಷೇತ್ರಗಳಲ್ಲಿ ಸರಿಯಾದ ಯೋಜನೆ ಆರಂಭಿಸಿ ಯುವ ಜನತೆ ಮುಂದೆ ಬರಬೇಕಾಗಿದೆ ಎಂದು ಉಡುಪಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶ್ರೀ ರಮಾನಂದ ನಾಯಕ್ ಅಭಿಪ್ರಾಯಪಟ್ಟರು.
ಅವರು, ಜಿಲ್ಲಾ ಕೈಗಾರಿಕಾ ಕೇಂದ್ರ-ಉಡುಪಿ ಮತ್ತು ಪಿ.ಐ.ಎಂನ ಅಂಗಸಂಸ್ಥೆಯಾದ ಪೂರ್ಣಪ್ರಜ್ಞ ಸಂಶೋಧನ ಹಾಗೂ ಅಭಿವೃದ್ಧಿ ಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಂಸ್ಥೆಯ ಎರಡನೇ ವರ್ಷದ ಎ0.ಬಿ.ಎ ವಿದ್ಯಾರ್ಥಿಗಳಿಗೆ ಏರ್ಪದಿಸಿದ್ದ ಉದ್ಯಮಶೀಲತಾ ಅಭಿವೃದ್ಡಿ ಪ್ರೇರಣಾ ಶಿಬಿರವನ್ನು ಆರಂಭಿಸಿ ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ್ದ, ಪಿಐಎಂನ ನಿರ್ದೇಶಕ ಡಾ. ಎಂ.ಆರ್. ಹೆಗಡೆಯವರು ಮಾತನಾಡಿ, ಎಂ.ಬಿ.ಎ ಮುಗಿಸಿ ಎಲ್ಲರೂ ಬಿಳಿಕೊರಳಪಟ್ಟಿ ನೌಕರಿ ಹುಡುಕುವ ಬದಲು, ಕೆಲವರಾದರೂ ತಮ್ಮದೇ ಆದ ಉದ್ಯಮ ಆರಂಭಿಸಲು ಪ್ರಯತ್ನಿಸಬೇಕೆಂದರು. ಆ ತೆರನಾಗಿ ಯಶಸ್ವೀ ಉದ್ಯಮಿಗಳಾದವರ ಉದಾಹರಣೆ ಕೊಟ್ಟು, ಅವರು ವಿದ್ಯಾರ್ಥಿಗಳಿಗೆ ಉದ್ಯಮಶೀಲತೆಯ ಕುರಿತು ಮಾರ್ಗದರ್ಶನ ಒದಗಿಸಿದರು.
ಪೂರ್ಣಪ್ರಜ್ಞ ಸಂಶೋಧನಾ ಹಾಗೂ ಅಭಿವೃದ್ಧಿ ಕೇಂದ್ರದ ಸಂಚಾಲಕ ಡಾ.ಕೃಷ್ಣ ಕೊತಾಯ ಎಲ್ಲರನ್ನೂ ಸ್ವಾಗತಿಸಿ, ಶಿಬಿರದ ಉದ್ದಿಶ್ಯ ತಿಳಿಸಿದರು.
ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ಉಪಪ್ರಾಂಶುಪಾಲ ಡಾ. ಭರತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ರಹ್ಮಾವರ ರುಡ್ ಸೆಟ್ ಸಂಸ್ಠೆಯ ಉಪನ್ಯಾಸಕ ಶ್ರೀ ಕರುಣಾಕರ ಹಾಗೂ ಡಾ.ಕೃಷ್ಣ ಕೊತಾಯ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ಒದಗಿಸಿದರು.
ಸ್ವಾತಿ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿ, ಪತಂಜಲಿ ಭಟ್ ಆಭಾರ ಸಲ್ಲಿಸಿದರು.