Founders Day at Poornaprajna Institute of Management: 2013

Udupi :  Founder’s Day was celebrated at PIM on 4th July, 2013. Sri U. K. Raghavendra Rao, the renowned Engineer of Udupi was the guest of honour of the function. 
Sri U. K. Raghavendra Rao reminded the memories of His Holiness Shri Vibudhesha Theertha Swamiji, the founder of Poornaprajna Educational Institutions, highlighting his contributions towards the development of Sri Krishna Mutt, Poornaprajna Educational Institutions and the Society at large.
Dr. G. S. Chandrashekar, Secretary of the Governing Council of the Institution, emphasized the Swamiji’s vision of providing value based education to the youth of our country and explained the efforts put forward by him towards providing the same to the youth in different parts of our country. Dr. G. S. Chandrashekar, in his presidential remarks, called upon the members of Poornaprajna family to follow the ethical path propagated by His holiness Swamiji.
The Director of the Institute, Dr. M. R. Hegde, Kernel Ramachandra Rao, the member of Governing Council of Poornaprajna College, the members of teaching and non-teaching staff and all others present on this occasion offered flowers to the photo of the visionary savant 

Shri Vibudhesha Theertha Swamiji, seeking his Divine blessings.


ಪಿಐಮ್‍ನಲ್ಲಿ ಸ್ಥಾಪಕರ ದಿನಾಚರಣೆ

ಉಡುಪಿ : ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ದಿನಾಂಕ 04-07-2013 ಗುರುವಾರದಂದುಸ್ಥಾಪಕರದಿನಾಚರಣೆಯನ್ನು  ಸಂಸ್ಥೆಯಗೌರವ ಕಾರ್ಯದರ್ಶಿಯಾಗಿರುವ ಡಾ| ಜಿ. ಎಸ್. ಚಂದ್ರಶೇಖರ್ ರವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಉಡುಪಿ ಶ್ರೀ ಅದಮಾರು ಮಠ ಎಜುಕೇಶನ್ಕೌನ್ಸಿಲ್ ಹಾಗೂ ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಗಳಸಂಸ್ಥಾಪಕರಾದ ಪರಮಪೂಜ್ಯಶ್ರೀ ಶ್ರೀ ವಿಬುಧೇಶತೀರ್ಥ ಶ್ರೀಪಾದಂಗಳವರ ದಿವ್ಯ ಚೇತನಕ್ಕೆಪ್ರಣಾಮ ಸಲ್ಲಿಸಿಆಶೀರ್ವಾದವನ್ನು ಕೋರುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಉಡುಪಿಯ ಖ್ಯಾತ ಇಂಜಿನಿಯರ್ಆಗಿರುವ ಶ್ರೀಯುತಯು. ಕೆ. ರಾಘವೇಂದ್ರರಾವ್ ಆಗಮಿಸಿದ್ದರು. ಸಂಸ್ಥೆಯನಿರ್ದೇಶಕರಾದ ಡಾ| ಎಂ. ಆರ್. ಹೆಗಡೆ ಮತ್ತು ಪೂರ್ಣಪ್ರಜ್ಞ ಕಾಲೇಜಿನಆಡಳಿತ ಮಂಡಳಿಯ ಸದಸ್ಯರಾದಕರ್ನಲ್ ರಾಮಚಂದ್ರರಾವ್ ರವರು ಉಪಸ್ಥಿತರಿದ್ದರು
ಶ್ರೀ ಯು. ಕೆ. ರಾಘವೇಂದ್ರ ರಾವ್ ಅವರು ಸ್ವಾಮೀಜಿಯವರ ಬಾಲ್ಯ, ವಿದ್ಯಾಭ್ಯಾಸ, ಪೀಠಾರೋಹಣ, ಪ್ರಥಮ ಪರ್ಯಾಯದ ಸಂದರ್ಭ, ವೇದಾಧ್ಯನ, ಮುಂತಾದ ಹಲವು ಘಟ್ಟಗಳನ್ನು ವಿವರಿಸಿ ಹೇಳಿದರು. ತನ್ನ ಮತ್ತು ಸ್ವಾಮೀಜಿಯವರ ಒಡನಾಟವನ್ನು ಮೆಲುಕು ಹಾಕುತ್ತಾ ಅವರು ಸ್ವಾಮೀಜಿಯವರ ನಂಬಿಕೆಗಳು, ರೀತಿನೀತಿಗಳು, ನಿಯಮಗಳು, ಮಠದ, ಊರಿನ ಹಾಗೂ ಸಮಾಜದ ಉನ್ನತಿಗೋಸ್ಕರ ಅವರು ಕೈಗೊಂಡ ಜನಹಿತ ಕಾರ್ಯಗಳನ್ನು ಉಲ್ಲೇಖಿಸಿ, ಜ್ಞಾನಾರ್ಜನೆಗೋಸ್ಕರ ಇದ್ದಂತಹ ಅವರ ತುಡಿತವನ್ನು ಎಳೆಎಳೆಯಾಗಿ ಸಭಾಸದರ ಮುಂದೆ ತೆರೆದಿಟ್ಟರು. ಉಡುಪಿಯ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಅದಮಾರು ಛತ್ರವನ್ನು ಸ್ಥಾಪಿಸಿದ್ದು, ರಸ್ತೆಯ ಕಾಂಕ್ರಿಟೀಕರಣವನ್ನು ಕೈಗೆತ್ತಿಕೊಂಡಿದ್ದು, ವೇದಾಧ್ಯಯನಕ್ಕೋಸ್ಕರ ವೇದಾಧ್ಯಯನ ಶಾಲೆಯನ್ನು ಸ್ಥಾಪಿಸಿದ್ದು, ಸಂಸ್ಕೃತ ಕಾಲೇಜಿನ ಉದ್ದಾರಕ್ಕೆ ಶ್ರಮಿಸಿದ್ದು, ಪೂರ್ಣಪ್ರಜ್ಞ ಸಂಸ್ಥೆಗಳನ್ನು ಸ್ಥಾಪಿಸಿದ್ದು, ಬೆಳ್ಳಿರಥ, ಚಿನ್ನದ ತೊಟ್ಟಿಲು ಅರ್ಪಿಸಿದ್ದು, ಶೌಚಾಲಯ ನಿರ್ಮಾಣ, ಮಧ್ವಾಚಾರ್ಯರ ಗುಡಿಯ ಜೀರ್ಣೋದ್ದಾರ, ಭೊಜನ ಶಾಲೆಯ ನವೀಕರನ, ಅದಮಾರು ಮೂಲ ಮಠದಲ್ಲಿ ಗುರುಕುಲ ಸ್ಥಾಪಿಸಿದ್ದು, ಪರ್ಯಾಯ ಕಾಲದಲ್ಲಿ ಕೈಗೊಂಡಂತಹ ಅನೇಕ ಜನಪರ ಕಾರ್ಯಕ್ರಮಗಳನ್ನು ಮುಖ್ಯ ಅತಿಥಿಗಳಾದ ಶ್ರೀ ಯು. ಕೆ. ರಾಘವೇಂದ್ರ ರಾವ್ರವರು ನೆನಪಿಸಿಕೊಂಡರು.
ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಗೌರವ ಕಾರ್ಯದರ್ಶಿಯಾಗಿ ಕಾಲೇಜಿನ ಸಂಸ್ಥಾಪನೆಗೆ ಕಾರಣವಾಗಿರುವುದು ಮಾತ್ರವಲ್ಲದೆ ಅದರ ನಿರಂತರ ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರ ವಹಿಸಿದಂತಹ ಡಾ| ಜಿ. ಎಸ್. ಚಂದ್ರಶೇಖರ್ ಅವರು ಭಾರತದ ಯುವಜನತೆಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವಲ್ಲಿ ಶ್ರೀಗಳವರು ಹೊಂದಿದ್ದ ದೂರದೃಷ್ಟಿಯನ್ನು ಕೊಂಡಾಡಿ, ಸ್ವಾಮೀಜಿಯವರ ಕನಸುಗಳನ್ನು ಸಕಾರಗೊಳಿಸುವ ನಿಟ್ಟಿನಲ್ಲಿ ಸಂಸ್ಥೆಯ ಸದಸ್ಯರೆಲ್ಲರೂ ಪರಿಪೂರ್ಣವಾಗಿ ತಮ್ಮನ್ನು ಸಂಸ್ಥೆಯ ಉನ್ನತಿಗೋಸ್ಕರ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಂಸ್ಥೆಯ ನಿರ್ದೇಶಕರಾದ ಡಾ| ಎಂ. ಆರ್. ಹೆಗಡೆಯವರು, ಮುಖ್ಯ ಅತಿಥಿಗಳು, ಅಧ್ಯಾಪಕ ಹಾಗೂ ಅಧ್ಯಾಪಕೇತರ ವೃಂದದವರೂ ಸೇರಿದಂತೆ ಸರ್ವರೂ ಶ್ರೀ ವಿಬುಧೇಶ ತೀರ್ಥ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಆಶೀರ್ವಾದವನ್ನು ಕೋರುವುದರೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು






Leave a Reply

Your email address will not be published. Required fields are marked *