Alumni Reunion Day at PIM

Alumni Reunion Day was held at Poornaprajna Institute of Management on 23rd September 2018. Old students belonging to PIM Batches 2006-2016 attended in the programme. Ms Sanjana Ninjur compered the programme.
Poornaprajna Institute of Management was established in the year 2016 by Sri Vibhudesha Theertha Swamiji and catering to the expectation of founder over the years 2006-2018.

Initially, Working President Sri Narashima welcomed the alumni and guests. Ms Shruthi Rao, Ms Mishel D’Souza and Ms Shwetha Rao rendered the invocation. 
His Holiness Sri Sri Sri Vishwapriyathirtha Swamiji of Admar Mutt and President of the Governing Council inaugurated the meet and gave his blessings. He compared the Alumni Meet as homecoming in an auspicious Day of Parvakala, Anantha Chaturdashi, not one, not two, it is Anantha, Eternal, a day of peaceful, a day of blissful. There were two tracks to run a train, one track is not sufficient. As all the alumni have reached their destination, it was a conclusive evidence of the correctness of two tracks. The two tracks were “Amma” and “Guru”, you cannot reciprocate the obligation of the mother, but one can pay back the obligation of Guru with the noble gestures like a homecoming like Alumni Meet and appreciating the noble gestures. He expressed his happiness over the way in which the alumni have been conducting the programme. 
He remembered the killing of Hirinyakashipu, Ravana and Jarasandha by Bhagavadroopi in the form of Narashima, Rama and Krishna, immediately Bhagavadroopi ordered to perform “Shardha” so that the obligations have to find redress. That is why alumni should not keep any obligations. 
The Treasurer of the Admar Mutt Education Council Sri Pradeep Kumar,  former Director of the institute, Dr M. R. Hegde, the present Director of the Institute Dr Bharath, Vice President Mr Pramod Shet, faculty who have been associated with the institute from the inception Prof. Santhosh Prabhu, Secretary of the Admar Council Dr Chandrashekar spoke on this occasion. Sri Pradeep Kumar called the other faculty to emulate Bharathi Karanth and obtain PhD, which was the wish of Guruji. 
Alumni felicitated Dr Bharathi Karanth with a Shaul, fruits on the occasion of her getting PhD and she thanked the Alumni for the wonderful gesture. 
Mr. Girish Aithal Nagur thanked the guests and alumni for the wonderful programme. 

Some of the videos of the earlier batch were also shown there, click here for the video of 2014 batches.

ಪೂರ್ಣಪ್ರಜ್ಞ ಇನ್ಸಿಟ್ಯೂಟ್ ಆಪ್ ಮೆನೇಜುಮೆಂಟ್ನಲ್ಲಿ ಪ್ರಾಕ್ತನ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ
ಶ್ರೀ ಶ್ರೀ ಶ್ರೀ ವಿಭುದೇಶ ತೀರ್ಥ ಸ್ವಾಮೀಜಿಗಳಿಂದ 2006ರಲ್ಲಿ ಸ್ತಾಪಿಸಲ್ಪಟ್ಟು ಸುಮಾರು ಒಂದು ದಶಕಗಳಿಂದಲೂ ಹೆಚ್ಚಿನ ಕಾಲದಿಂದ ಆಡಳಿತ ವೃತ್ತಿಪರರನ್ನು ತಯಾರಿಸುವಲ್ಲಿ ಯಶಸ್ಸಿನಿಂದ ಮುನ್ನಡೆಯುತ್ತಿರುವ ಪೂರ್ಣಪ್ರಜ್ಞ ಇನ್ಸಿಟ್ಯೂಟ್ ಆಪ್ ಮೆನೇಜುಮೆಂಟ್ನ 2006-2008 ರಿ0ದ 2016-18  ರ ಪ್ರಾಕ್ತನ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ತಾರೀಕು 23-09-2018ರಂದು ಸಂಸ್ಥೆಯ ಪ್ರಜ್ಞಾ ಹಾಲಿನಲ್ಲಿ ಜರಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಶ್ರೀ ಶ್ರೀ ವಿಶ್ವಪ್ರೀಯತೀರ್ಥ ಸ್ವಾಮೀಜಿಯವರು ಪ್ರಾಕ್ತನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ವಿದ್ಯೆಯನ್ನು ಕಲಿತ ನಂತರ ಗುರವನ್ನು ಶಿಷ್ಯನು ತ್ಯಜಿಸುತ್ತಾನೆ. ಅಂತೆಯೇ ಬೆಳೆದು ನಿಂತ ಮಗನು ತನ್ನ ಅವಶ್ಯಕತೆಗಳು ತೀರಿದ ನಂತರ ತಾಯಿಯನ್ನು ತ್ಯಜಿಸುತ್ತಾನೆ. ಉದ್ಯೋಗದ ನಿಮತ್ತ, ಅಥವಾ ಲಗ್ನ ಅಗಿ ಮನೆಯಿಂದ ದೂರ ಹೋಗಿರುವ ಮಕ್ಕಳು  ಮನೆಗೆ ಬಂದ ವಾತಾವರಣ. ಅದು ಮನೆಗೆ ಬರುವುದು ಹಬ್ಬದ ಸಂದರ್ಭದಲ್ಲಿ. ಇಂದು ಹಬ್ಬದ ಸಂದರ್ಭ, ಇಂದು ಮಹಾ ಪರ್ವಕಾಲ, ಅನಂತ ಚತುರ್ದಶಿ, ಒಂದಲ್ಲ, ಎರಡಲ್ಲ, ಅನಂತ, ಅಷ್ಟು ನೆಮ್ಮದಿ ಕೊಡುವ ದಿವಸ. ತಾಯಿ ನಮಗೆ ಜನ್ಮ ನೀಡಿದವಳು, ಬೌದ್ಧಿಕವಾಗಿ ನಮ್ಮನ್ನು ಉದ್ದರಿಸಿದವರು ಶಿಕ್ಷಕರು. ಉಗಿಬಂಡಿ ಸಾಗಲು ಹೇಗೆ ಎರಡು ಹಳಿಗಳು ಹೇಗೆ ಆವಶ್ಯಕತೆಯಿದೆಯಾ ಹಾಗೆಯೇ ನೀವು ಇಂದು ಜೀವನದಲ್ಲಿ ಯಶಸ್ಸು ಸಾಧಿಸಿ ಇಂದು ಪುನ: ಬಂದಿರುವುದು ಆ ಎರಡೂ ಹಳಿಗಳು ಉಗಿಬಂಡಿ ಗುರಿ ಮುಟ್ಟಿದ್ದು ಸಾಕ್ಷಿ. ನಮಗೆ ಕಲಿಸಿದ ಅದ್ಯಾಪಕರಿಗೆ ಗೌರವ ಕೊಡಲು ಬಹುದೂರದಿಂದ ನೀವು ಬಂದದ್ದು, ಇದು ನಮಗೆ ತುಂಬ ಸಂತೋಷ ಕೊಟ್ಟ ವಿಷಯ. ನೀವು ನಿಮ್ಮ ಜೀವನದಲ್ಲಿ ಉತ್ತಮ ಸ್ಥಾನ ಮಾನಗಳನ್ನು ಗಳಿಸಿದ್ದರೂ ತಮ್ಮ ಮಾತೃ ಸಂಸ್ಥೆಯಾದ ಪೂರ್ಣಪ್ರಜ್ಞ ಇನ್ಸಿಟ್ಯೂಟ್ ಆಪ್ ಮೆನೇಜುಮೆಂಟನ್ನು ನೆನಪಿಟ್ಟುಕೊಂಡು ಅದರ ಏಳಿಗೆಗೆ ಬದ್ಧರಾಗಿದ್ದದು ಸಂತಸವನ್ನು ನೀಡುವ ವಿಷಯ. ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ. ಭಾಗವತದಲ್ಲಿ ಋಣಪರಿಹಾರಕ್ಕೆ ತುಂಬ ಪ್ರಾಮಖ್ಯ ಕೊಟ್ಟಿದ್ದಾರೆ. ಹಿರಣ್ಯಕಶಿಪು, ರಾವಣ, ಜರಾಸಂಧರನ್ನು ಭಗವದ್ರೂಪಿಗಳಾದ ನರಸಿಂಹ, ರಾಮ, ಕೃಷ್ಣ ಕೊಂದ ಕೂಡಲೇ ಭಗವಂತ ಅವರ ಮಕ್ಕಳನ್ನು ಕರೆದು ಅವರ ಋಣ ತೀರಿಸಲು ಅವರಿಗೆ ಕೂಡಲೇ ಶ್ರಾಧ್ಧ ಮಾಡಲು ಹೇಳಿದ್ದರು. ಆದರೆ ಗುರುಗಳ ಋಣವನ್ನು ಹೀಗೆ ಪುನ: ತಾವು ಕಲಿತ ಸಂಸ್ಥೆಗ ಬಂದು ಸ್ವಲ್ಪ  ತೀರಿಸಲು ಸಾದ್ಯವೆಂದು ಹೇಳಿದರು.
ಅದಮಾರು ಸಂಸ್ಥೆಗಳ ಖಜಾಂಚಿ ಹಾಗೂ ಉಡುಪಿಯ ಪ್ರಖ್ಯಾತ ವಕೀಲರಾದ ಶ್ರೀ ಪ್ರದೀಪ್ ಕುಮಾರ ಅವರು ಪ್ರಾಕ್ತನ ವಿದ್ಯಾರ್ಥಿಗಳ ಈ ಕಾರ್ಯಕ್ರಮದ ಬಗೆಗೆ ಸಂತಸವನ್ನು ವ್ಯಕ್ತಪಡಿಸುತ್ತಾ, ಮಂಕುತಿಮ್ಮನ, “ಹಳೆಬೇರು, ಹೊಸಚಿಗುರು ಕೂಡಿರಲು ಮರ ಸೊಗಸು” ಎಂದು ಹೇಳಿದರು.
ಪ್ರಾಕ್ತನ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಅದ್ಯಾಪಿಕೆ ಡಾ. ಭಾರತಿ ಕಾರಂತ್ ಅವರಿಗೆ ಮ್ಯಸೂರು ವಿಶ್ವವಿದ್ಯಾಲಯ ಪಿ. ಎಚ್. ಡಿ ಪದವಿ ನೀಡಿದ್ದಕ್ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಖಜಾಂಚಿ ಶ್ರೀ ಪ್ರದೀಪ ಕುಮಾರ್ ಅವರಿಂದ ಗೌರವಿಸಿದರು. ಡಾ. ಭಾರತಿ ಕಾರಂತ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸಂಸ್ಥೆಯ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಥೆಯ ಹಿಂದಿನ ನಿರ್ದೇಶಕಾರದ ಡಾ. ಎಮ್. ಆರ್. ಹೆಗ್ಡೆಯವರು ಮಾತನಾಡುತ್ತಾ, ಪಿ. ಐ. ಎಮ್‍ನ ಹಳೆ ವಿದ್ಯಾರ್ಥಿಗಳು ಅವರ ಬುದ್ಧಿವಂತಿಗೆಯಿಂದ, ಪರಿಶ್ರಮದಿಂದ ಮಾತ್ರವಲ್ಲದೆ, ಅವರ ಉತ್ತಮ ಗುಣನಡತೆಯಿಂದ ಪೂರ್ಣಪ್ರಜ್ಞಕ್ಕೆ ಉತ್ತಮ ಹೆಸರನ್ನು ಅವರು ಕೆಲಸಮಾಡುವ ಅನೇಕ ಉದ್ಯಮ ಸಂಸ್ಥೆಗಳಿಂದ ಪಡೆದಿರುತ್ತಾರೆ ಎಂದರು.  ಈಗಿನ ನಿರ್ದೇಶಕರಾದ ಡಾ. ಭರತ್, ಪ್ರೊ. ಸಂತೋಷ್ ಪ್ರಭು ಪ್ರಾಕ್ತನ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಚಂದ್ರಶೇಖರ್ ಪ್ರಾಕ್ತನ ವಿದ್ಯಾರ್ಥಿಗಳ ಈ ಸಮಗ್ರ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹಳೆವಿದ್ಯಾರ್ಥಿ ಸಂಘದ ಅದ್ಯಕ್ಷ ಶ್ರೀ ನರಸಿಂಹ ಎಸ್. ಎಸ್. ಸ್ವಾಗತಿಸಿ, ಕು. ಸಂಜನಾ ನಿಂಜೂರ್ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಕು. ಶ್ರುತಿ ರಾವ್, ಮಿಷಲ್ ಡಿಸೋಜ ಹಾಗೂ ಶ್ವೇತ ಸಂಸ್ಥೆಯ ಪ್ರಾರ್ಥನೆಯನ್ನು ಹಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ಗಿರೀಶ್ ಐತಾಳ್ ನಾಗೂರು ವಂದನಾರ್ಪಣೆ ಮಾಡಿದರು. ಸಂಸ್ಥೆಯ 2006-08 ರಿಂದ 2016-18ರ ವರೆಗಿನ ಹನ್ನೊಂದು ಬ್ಯಾಚಿನ ವಿದ್ಯಾರ್ಥಿಗಳು ಈ ಒಕ್ಕೂಟದಲ್ಲಿ ಬಾಗವಹಿಸಿ ನಮ್ಮ ನೆನಪಿನ ಬುತ್ತಯನ್ನು ನೆರೆದವರೊಡನೆ ಹಂಚಿಕೊಂಡಿದ್ದರಲ್ಲದೆ, ಪ್ರಸಕ್ತ ವಿದ್ಯಾರ್ಥಿಗಳಿಗೆ ಉತ್ತಮ ಸಲಹೆಗಳನ್ನು ನೀಡಿದರು. ಪೂರ್ಣಪ್ರಜ್ಞ ಇನ್ಸಿಟ್ಯೂಟ್ ಆಪ್ ಮೆನೇಜುಮೆಂಟ್ ಇದರ ಡೀನ್ ಡಾ. ಸುರೇಶರಮಣ ಮಯ್ಯ, ಸಂಶೋಧನ ವಿಭಾಗದ ಸಂಯೋಜಕರಾದ. ಡಾ. ಕೃಷ್ಣ ಕೊತಾಯಿ, ಬೋಧಕ ಹಾಗೂ ಬೋಧಕೇತರ ವೃಂದ ಹಾಗೂ ಪ್ರಸ್ತುತ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸಭೆಯು ಲಘು ಬೋಜನದೊಂದಿಗೆ ಸಮಾಪ್ತಿಗೊಂಡಿತು. 






Leave a Reply

Your email address will not be published. Required fields are marked *