ಪೂರ್ಣಪ್ರಜ್ಞ ಮೆನೇಜುಮೆಂಟು ಸಂಸ್ಥೆಯಿಂದ ಇಂದಿರಾನಗರ ಸರಕಾರಿ ಪ್ರೌಡಶಾಲೆಯ ವಿಧ್ಯಾರ್ಥಿಗಳಿಗೆ ಇಂಗ್ಲಿIಷ್ ಸಂವಹ:ನ ತರಬೇತಿ ಕಾರ್ಯಕ್ರಮದ ಉದ್ಘಾಟನೆ


ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಉಡುಪಿ ಮತ್ತು ಇಂದಿರಾನಗರ ಸರಕಾರಿ ಪ್ರೌಢಶಾಲೆ, ಇದರ  ಸಹಯೋಗದಿಂದ ಶಾಲೆಯ ವಿದ್ಯಾರ್ಥಿಗಳಿಗೆ ೨ ಗಂಟೆಗಳ ಇಂಗ್ಲಿ!ಷ್ ತರಬೇತಿ ಕಾರ್ಯಕ್ರಮವನ್ನು ಪ್ರತೀ ಶನಿವಾರ ಮಧ್ಯಾಹ್ನ ಸುಮಾರು ೨ ತಿಂಗಳವರೆಗೆ ಹಮ್ಮಿಕೊಂಡಿದೆ. ತರಬೇತಿಯನ್ನು ತರಬೇತುದಾರರಾದ ಶ್ರಿ! ಜಯಕೃಷ್ಣ ಭಟ್ ಅವರು ನಡೆಸಿಕೊಡುತ್ತಾರೆ. ಇದರ ಉದ್ಘಾಟನೆಯು ಶಾಲೆಯಲ್ಲಿ ಫೆಭ್ರವರಿ. ೨ ರಂದು ನಡೆಯಿತು. ಶ್ರಿ!ಕೃಷ್ಣ ಬಾಲನಿಕೇತನ ಆಶ್ರಮದ ಕಾರ್ಯದರ್ಶಿಗಳಾದ ಶ್ರಿ! ರಾಮಚಂದ್ರ ಉಪಾಧ್ಯಾಯರು ಉದ್ಘಾಟಿಸುತ್ತಾ, “ಇಂಗ್ಲಿ!ಷ್ ಬಾಷೆಯ ಜ್ಞಾನ ನಮ್ಮ ಅಭಿವ್ಯಕ್ತಿಯನ್ನು ಸಮರ್ಥವಾಗಿ ವ್ಯಕ್ತಪಡಿಸಲು ಆವಶ್ಯಕತೆಯಿದೆ. ಸರಕಾರಿ ಶಾಲೆಗಳ ವಿದ್ಯಾರ್ಥಿಗಳು ಉಳಿದ ಶಾಲೆಗಳಿಗಿಂತ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲ ಎಂಬುದನ್ನು ಈ ಶಾಲೆ ಹಲವಾರು ವರ್ಷಗಳಿಂದ ತೋರಿಸಿಕೊಟ್ಟಿದೆ. ಭವಿಷ್ಯವನ್ನು ದೃಷ್ಠಿಯಲ್ಲಿಟ್ತುಕೊಂಡು ಹೇಳುವುದಿದ್ದರೆ, ಮುಂದಿನ ವರ್ಷಗಳಲ್ಲಿ ಇಂಗ್ಲಿ!ಷ್ ಭಾಷೆ ಹಾಗೂ ಅದರಲ್ಲಿ ಸ್ಪಷ್ಠವಾಗಿ ಮಾತನಾಡುವ ಜಾಣ್ಮೆಯನ್ನು ನಮ್ಮ ವಿದ್ಯಾರ್ಥಿಗಳು ಮ್ಯೆಗೂಡಿಸಿಕೊಂಡು, ಈ ಕಾರ್ಯಕ್ರಮದ ಉಪಯೋಗವನ್ನು ಶಾಲೆಯ ವಿದ್ಯಾರ್ಥಿಗಳು ಪಡೆಯಬೇಕೆಂದರು. ಅತಿಥಿಗಳಾಗಿ ಪಿ.ಐ.ಎಂ ನ ಮಾಜಿ ನಿರ್ದೆ!ಶಕರಾದ  ಡಾ ಎಂ.ಆರ್. ಹೆಗ್ಡೆಯವರು ವಿದ್ಯಾರ್ಥಿಗಳನ್ನು ಉದ್ದೆ!ಶಿಸಿ ಮಾತನಾಡುತ್ತಾ ಇಂದಿನಿಂದ ಮಾರ್ಚ್ ೩೧ರ ವರೆಗೆ ೯ ಶನಿವಾರ ಸುಮಾರು ೨ ಗಂಟೆಗಳ ಕಾಲ ಈ ತರಬೇತಿ ಜರಗಲಿದೆ ಎಂದು ಹೇಳುತ್ತಾ, ಇದರ ಸದುಪಯೋಗವನ್ನು ಪಡೆಯಬೇಕೆಂದು ಕರೆನೀಡಿದರು. ಪಿ.ಐ.ಎಂನ ನಿರ್ದೆ!ಶಕ  ಡಾ ಭರತ್ ವಿದ್ಯಾರ್ಥಿಗಳನ್ನುದ್ದೆ!ಶಿಸಿ ಮಾತನಾಡಿದರು. ಸಂಸ್ಥೆಯ ಡೀನ್ ಸುರೇಶ್‌ರಮಣ ಮಯ್ಯ ವೇದಿಕೆಯಲ್ಲಿದ್ದರು. ಮುಖ್ಯೊ!ಪಧ್ಯಾಯ ಶ್ರಿ! ಮಂಜುನಾಥರವರು ಸ್ವಾಗತಿಸಿ, ಪರಿಚಯ  ಭಾಷಣ ಮಾಡಿದರು. ಶ್ರಿ! ಸೋಮಶೇಖರ್ ಅವರು ವಂದನಾರ್ಪಣಗೈದರು. ಶಿಕ್ಷಕಿ ಜಯಂತಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.






Leave a Reply

Your email address will not be published. Required fields are marked *