ಶ್ರೀ ಶ್ರೀ ಶ್ರೀ ವಿಭುದೇಶ ತೀರ್ಥ ಸ್ವಾಮೀಜಿಗಳಿಂದ 2006ರಲ್ಲಿ ಸ್ತಾಪಿಸಲ್ಪಟ್ಟು ಸುಮಾರು ಒಂದು ದಶಕಗಳಿಂದಲೂ ಹೆಚ್ಚಿನ ಕಾಲದಿಂದ ಆಡಳಿತ ವೃತ್ತಿಪರರನ್ನು ತಯಾರಿಸುವಲ್ಲಿ ಯಶಸ್ಸಿನಿಂದ ಮುನ್ನಡೆಯುತ್ತಿರುವ ಪೂರ್ಣಪ್ರಜ್ಞ ಇನ್ಸಿಟ್ಯೂಟ್ ಆಪ್ ಮೆನೇಜುಮೆಂಟ್ನ 2006-2008 ರಿ0ದ 2016-18 ರ ಪ್ರಾಕ್ತನ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ತಾರೀಕು 23-09-2018ರಂದು ಸಂಸ್ಥೆಯ ಪ್ರಜ್ಞಾ ಹಾಲಿನಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಶ್ರೀ ಶ್ರೀ ವಿಶ್ವಪ್ರೀಯತೀರ್ಥ ಸ್ವಾಮೀಜಿಯವರು ಪ್ರಾಕ್ತನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ವಿದ್ಯೆಯನ್ನು ಕಲಿತ ನಂತರ ಗುರವನ್ನು ಶಿಷ್ಯನು ತ್ಯಜಿಸುತ್ತಾನೆ. ಅಂತೆಯೇ ಬೆಳೆದು ನಿಂತ ಮಗನು ತನ್ನ ಅವಶ್ಯಕತೆಗಳು ತೀರಿದ ನಂತರ ತಾಯಿಯನ್ನು ತ್ಯಜಿಸುತ್ತಾನೆ. ಉದ್ಯೋಗದ ನಿಮತ್ತ, ಅಥವಾ ಲಗ್ನ ಅಗಿ ಮನೆಯಿಂದ ದೂರ ಹೋಗಿರುವ ಮಕ್ಕಳು ಮನೆಗೆ ಬಂದ ವಾತಾವರಣ. ಅದು ಮನೆಗೆ ಬರುವುದು ಹಬ್ಬದ ಸಂದರ್ಭದಲ್ಲಿ. ಇಂದು ಹಬ್ಬದ ಸಂದರ್ಭ, ಇಂದು ಮಹಾ ಪರ್ವಕಾಲ, ಅನಂತ ಚತುರ್ದಶಿ, ಒಂದಲ್ಲ, ಎರಡಲ್ಲ, ಅನಂತ, ಅಷ್ಟು ನೆಮ್ಮದಿ ಕೊಡುವ ದಿವಸ. ತಾಯಿ ನಮಗೆ ಜನ್ಮ ನೀಡಿದವಳು, ಬೌದ್ಧಿಕವಾಗಿ ನಮ್ಮನ್ನು ಉದ್ದರಿಸಿದವರು ಶಿಕ್ಷಕರು. ಉಗಿಬಂಡಿ ಸಾಗಲು ಹೇಗೆ ಎರಡು ಹಳಿಗಳು ಹೇಗೆ ಆವಶ್ಯಕತೆಯಿದೆಯಾ ಹಾಗೆಯೇ ನೀವು ಇಂದು ಜೀವನದಲ್ಲಿ ಯಶಸ್ಸು ಸಾಧಿಸಿ ಇಂದು ಪುನ: ಬಂದಿರುವುದು ಆ ಎರಡೂ ಹಳಿಗಳು ಉಗಿಬಂಡಿ ಗುರಿ ಮುಟ್ಟಿದ್ದು ಸಾಕ್ಷಿ. ನಮಗೆ ಕಲಿಸಿದ ಅದ್ಯಾಪಕರಿಗೆ ಗೌರವ ಕೊಡಲು ಬಹುದೂರದಿಂದ ನೀವು ಬಂದದ್ದು, ಇದು ನಮಗೆ ತುಂಬ ಸಂತೋಷ ಕೊಟ್ಟ ವಿಷಯ. ನೀವು ನಿಮ್ಮ ಜೀವನದಲ್ಲಿ ಉತ್ತಮ ಸ್ಥಾನ ಮಾನಗಳನ್ನು ಗಳಿಸಿದ್ದರೂ ತಮ್ಮ ಮಾತೃ ಸಂಸ್ಥೆಯಾದ ಪೂರ್ಣಪ್ರಜ್ಞ ಇನ್ಸಿಟ್ಯೂಟ್ ಆಪ್ ಮೆನೇಜುಮೆಂಟನ್ನು ನೆನಪಿಟ್ಟುಕೊಂಡು ಅದರ ಏಳಿಗೆಗೆ ಬದ್ಧರಾಗಿದ್ದದು ಸಂತಸವನ್ನು ನೀಡುವ ವಿಷಯ. ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ. ಭಾಗವತದಲ್ಲಿ ಋಣಪರಿಹಾರಕ್ಕೆ ತುಂಬ ಪ್ರಾಮಖ್ಯ ಕೊಟ್ಟಿದ್ದಾರೆ. ಹಿರಣ್ಯಕಶಿಪು, ರಾವಣ, ಜರಾಸಂಧರನ್ನು ಭಗವದ್ರೂಪಿಗಳಾದ ನರಸಿಂಹ, ರಾಮ, ಕೃಷ್ಣ ಕೊಂದ ಕೂಡಲೇ ಭಗವಂತ ಅವರ ಮಕ್ಕಳನ್ನು ಕರೆದು ಅವರ ಋಣ ತೀರಿಸಲು ಅವರಿಗೆ ಕೂಡಲೇ ಶ್ರಾಧ್ಧ ಮಾಡಲು ಹೇಳಿದ್ದರು. ಆದರೆ ಗುರುಗಳ ಋಣವನ್ನು ಹೀಗೆ ಪುನ: ತಾವು ಕಲಿತ ಸಂಸ್ಥೆಗ ಬಂದು ಸ್ವಲ್ಪ ತೀರಿಸಲು ಸಾದ್ಯವೆಂದು ಹೇಳಿದರು.
ಅದಮಾರು ಸಂಸ್ಥೆಗಳ ಖಜಾಂಚಿ ಹಾಗೂ ಉಡುಪಿಯ ಪ್ರಖ್ಯಾತ ವಕೀಲರಾದ ಶ್ರೀ ಪ್ರದೀಪ್ ಕುಮಾರ ಅವರು ಪ್ರಾಕ್ತನ ವಿದ್ಯಾರ್ಥಿಗಳ ಈ ಕಾರ್ಯಕ್ರಮದ ಬಗೆಗೆ ಸಂತಸವನ್ನು ವ್ಯಕ್ತಪಡಿಸುತ್ತಾ, ಮಂಕುತಿಮ್ಮನ, “ಹಳೆಬೇರು, ಹೊಸಚಿಗುರು ಕೂಡಿರಲು ಮರ ಸೊಗಸು” ಎಂದು ಹೇಳಿದರು.
ಪ್ರಾಕ್ತನ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಅದ್ಯಾಪಿಕೆ ಡಾ. ಭಾರತಿ ಕಾರಂತ್ ಅವರಿಗೆ ಮ್ಯಸೂರು ವಿಶ್ವವಿದ್ಯಾಲಯ ಪಿ. ಎಚ್. ಡಿ ಪದವಿ ನೀಡಿದ್ದಕ್ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಖಜಾಂಚಿ ಶ್ರೀ ಪ್ರದೀಪ ಕುಮಾರ್ ಅವರಿಂದ ಗೌರವಿಸಿದರು. ಡಾ. ಭಾರತಿ ಕಾರಂತ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸಂಸ್ಥೆಯ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಹಿಂದಿನ ನಿರ್ದೇಶಕಾರದ ಡಾ. ಎಮ್. ಆರ್. ಹೆಗ್ಡೆಯವರು ಮಾತನಾಡುತ್ತಾ, ಪಿ. ಐ. ಎಮ್ನ ಹಳೆ ವಿದ್ಯಾರ್ಥಿಗಳು ಅವರ ಬುದ್ಧಿವಂತಿಗೆಯಿಂದ, ಪರಿಶ್ರಮದಿಂದ ಮಾತ್ರವಲ್ಲದೆ, ಅವರ ಉತ್ತಮ ಗುಣನಡತೆಯಿಂದ ಪೂರ್ಣಪ್ರಜ್ಞಕ್ಕೆ ಉತ್ತಮ ಹೆಸರನ್ನು ಅವರು ಕೆಲಸಮಾಡುವ ಅನೇಕ ಉದ್ಯಮ ಸಂಸ್ಥೆಗಳಿಂದ ಪಡೆದಿರುತ್ತಾರೆ ಎಂದರು. ಈಗಿನ ನಿರ್ದೇಶಕರಾದ ಡಾ. ಭರತ್, ಪ್ರೊ. ಸಂತೋಷ್ ಪ್ರಭು ಪ್ರಾಕ್ತನ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಚಂದ್ರಶೇಖರ್ ಪ್ರಾಕ್ತನ ವಿದ್ಯಾರ್ಥಿಗಳ ಈ ಸಮಗ್ರ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹಳೆವಿದ್ಯಾರ್ಥಿ ಸಂಘದ ಅದ್ಯಕ್ಷ ಶ್ರೀ ನರಸಿಂಹ ಎಸ್. ಎಸ್. ಸ್ವಾಗತಿಸಿ, ಕು. ಸಂಜನಾ ನಿಂಜೂರ್ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಕು. ಶ್ರುತಿ ರಾವ್, ಮಿಷಲ್ ಡಿಸೋಜ ಹಾಗೂ ಶ್ವೇತ ಸಂಸ್ಥೆಯ ಪ್ರಾರ್ಥನೆಯನ್ನು ಹಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ಗಿರೀಶ್ ಐತಾಳ್ ನಾಗೂರು ವಂದನಾರ್ಪಣೆ ಮಾಡಿದರು. ಸಂಸ್ಥೆಯ 2006-08 ರಿಂದ 2016-18ರ ವರೆಗಿನ ಹನ್ನೊಂದು ಬ್ಯಾಚಿನ ವಿದ್ಯಾರ್ಥಿಗಳು ಈ ಒಕ್ಕೂಟದಲ್ಲಿ ಬಾಗವಹಿಸಿ ನಮ್ಮ ನೆನಪಿನ ಬುತ್ತಯನ್ನು ನೆರೆದವರೊಡನೆ ಹಂಚಿಕೊಂಡಿದ್ದರಲ್ಲದೆ, ಪ್ರಸಕ್ತ ವಿದ್ಯಾರ್ಥಿಗಳಿಗೆ ಉತ್ತಮ ಸಲಹೆಗಳನ್ನು ನೀಡಿದರು. ಪೂರ್ಣಪ್ರಜ್ಞ ಇನ್ಸಿಟ್ಯೂಟ್ ಆಪ್ ಮೆನೇಜುಮೆಂಟ್ ಇದರ ಡೀನ್ ಡಾ. ಸುರೇಶರಮಣ ಮಯ್ಯ, ಸಂಶೋಧನ ವಿಭಾಗದ ಸಂಯೋಜಕರಾದ. ಡಾ. ಕೃಷ್ಣ ಕೊತಾಯಿ, ಬೋಧಕ ಹಾಗೂ ಬೋಧಕೇತರ ವೃಂದ ಹಾಗೂ ಪ್ರಸ್ತುತ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸಭೆಯು ಲಘು ಬೋಜನದೊಂದಿಗೆ ಸಮಾಪ್ತಿಗೊಂಡಿತು.