ಆಧುನಿಕ ಉಡುಪಿಯ ಹರಿಕಾರರಾಗಿ ಶ್ರೀ ವಿಬುಧೇಶತೀರ್ಥರು

 1970-80 ರ ದಶಕದಲ್ಲಿ ಉಡುಪಿಯು ಮೂಡನಂಬಿಕೆ ಹಾಗೂ ಕಂದಾಚಾರಗಳ ತವರೂರಾಗಿತ್ತು. ನೈರ್ಮಲ್ಯಹೀನತೆ ಹೊಂದಿತ್ತು. ಮಹಿಳೆಯರಿಗೆ ಸಮಾನ ವಿದ್ಯಾವಕಾಶಗಳಿರಲಿಲ್ಲ. ಬಡವಿದ್ಯಾರ್ಥಿಗಳಿಗಂತೂ ವಿದ್ಯೆಯು ಗಗನಕುಸುಮವಾಗಿತ್ತು. ಇಂತಹ ಸಂದರ್ಭದಲ್ಲಿ ಶ್ರೀ ಅದಮಾರು ಮಠದ ಶ್ರೀ ವಿಬುಧೇಶತೀರ್ಥರು ಸ್ವಾಮೀಜಿಯವರು ಉಡುಪಿಯ ಅಭಿವøದ್ಧಿಗೆ ವಿಶೇಷ ಕೊಡುಗೆ ನೀಡಿದರು.  ರಸ್ತೆಯ ಕಾಂಕ್ರೀಟಿಕರಣ, ಪರಿಸರದ ನೈರ್ಮಲ್ಯ ಸುಧಾರಣೆ, ಮಹಿಳೆಯರಿಗೆ ಸಮಾನ ವಿದ್ಯಾಭ್ಯಾಸದ ಅವಕಾಶ, ಇಂಗ್ಲಿಷ್ ಭಾಷೆಯ ಕಲಿಕೆಗೆ ಆಧ್ಯತೆ, ಬಡವಿದ್ಯಾರ್ಥಿಗಳು ಹಾಗೂ ವಿದ್ಯೆಯಿಂದ ವಂಚಿತರಾದವರಿಗೆ ಪೂರ್ಣಪ್ರಜ್ಞ ಸಂದ್ಯಾ ಕಾಲೇಜಿನ ಸ್ಥಾಪನೆ ಮುಂತಾದವುಗಳ ಮೂಲಕ ಶ್ರೀ ವಿಬುಧೇಶತೀರ್ಥರು ಆಧುನಿಕ ಉಡುಪಿಯ ಹರಿಕಾರರೆನಿಸಿಕೊಂಡರು ಎಂದು ಪೂರ್ಣಪ್ರಜ್ಞ ಕಾಲೇಜಿನ ನಿವ್ರತ್ತ ಪ್ರಾದ್ಯಾಪಕ ಪೆÇ್ರ. ಮುರಳೀಧರ ಉಪಾದ್ಯ ಹಿರಿಯಡಕ ಅವರು ಅಭಿಪ್ರಾಯ ಪಟ್ಟರು. ಅದಮಾರು ಮಠ ವಿದ್ಯಾಸಂಸ್ಥೆಗಳ ಸ್ಥಾಪಕರಾದ ಶ್ರೀ ವಿಬುಧೇಶತೀರ್ಥ ಶ್ರೀಪಾದರು ತಮ್ಮ ಶಿಸ್ತು ಬದ್ದವಾದ ನಡವಳಿಕೆ, ದೂರದøಷ್ಟಿತ್ವ, ಸತತವಾಗಿ ಕ್ರಿಯಾಶೀಲರಾಗಿರುವುದು, ಜ್ಞಾನದ ಪ್ರಸರಣೆಗೋಸ್ಕರ ತುಡಿತ ಮುಂತಾದವುಗಳ ಮೂಲಕ ಸಮಾಜದ ಹಾಗೂ ದೇಶದ ಅಭಿವøದ್ಧಿಗೆ ಕಾರಣೀಭೂತರಾದ ಬಗೆಯನ್ನು ಪೆÇ್ರ. ಮುರಳೀಧರ ಉಪಾದ್ಯರು ಹಂತ ಹಂತವಾಗಿ ವಿವರಿಸಿದರು. ಅವರು ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ 03-06-2014 ರಂದು ಸಂಸ್ಥಾಪಕರ ದಿನಾಚರಣೆಯ ಸಂಧರ್ಭದಲ್ಲಿ ಮಾತನಾಡುತ್ತಿದ್ದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯರಾದ ಡಾ. ಎಂ. ಆರ್. ಹೆಗಡೆಯವರು ವಹಿಸಿದ್ದರು. ದ್ವಿತೀಯ ಎಂ.ಬಿ.ಎ. ವಿದ್ಯಾರ್ಥಿಗಳಾದ ಪ್ರಜ್ಞಾ ಭಾರದ್ವಾಜ್, ಶ್ರುತಿ ರಾವ್ ಹಾಗೂ ಪ್ರಜ್ಞಾ ಪಂಡಿತ್ ಕಾರ್ಯಕ್ರಮ ನಿರ್ವಹಿಸಿದರು.






Leave a Reply

Your email address will not be published. Required fields are marked *